ಟಾಟಾ ಸನ್ಸ್ ಅಧ್ಯಕ್ಷ ಎನ್.ಚಂದ್ರಶೇಖರನ್ ರಾಜೀನಾಮೆ: ಕಂಪನಿ ಷೇರುಗಳು ಕುಸಿತ
Tata Sons Chairman N.Chandrasekaran Resigned: ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ಎನ್.ಚಂದ್ರಶೇಖರನ್ ಇಂದು ರಾಜೀನಾಮೆ ನೀಡಿದ್ದಾರೆ.
ಮುಂಬೈ: ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ಎನ್.ಚಂದ್ರಶೇಖರನ್ (N.Chandrasekaran) ಇಂದು ರಾಜೀನಾಮೆ ನೀಡಿದ್ದಾರೆ.
ಆ.18 ರಂದು ನಡೆಯಲಿರುವ ಕಂಪನಿಯ ವಾರ್ಷಿಕ ಸಭೆಗೂ ಮುನ್ನ, ಅವರು ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಪ್ರಸ್ತುತ ಅವಧಿ ಮುಗಿದ ನಂತರ, ಮರುನೇಮಕಾತಿ ಬಯಸುವುದಿಲ್ಲ ಹೇಳಿದ್ದಾರೆ.
2027ರ ಫೆಬ್ರವರಿಯಲ್ಲಿ ಅವರ ಅಧಿಕಾರಾವಧಿಯು ಕೊನೆಗೊಳ್ಳಲಿದೆ. ಚಂದ್ರಶೇಖರನ್ 1987 ರಲ್ಲಿ ಟಾಟಾ ಗ್ರೂಪ್ ಸೇರಿದರು. 2009 ರಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಸಿಇಒ ಆದರು. 2017 ರಲ್ಲಿ ಟಾಟಾ ಸನ್ಸ್ ಅಧ್ಯಕ್ಷರಾಗಿ ನೇಮಕಗೊಂಡರು.
ಕಳೆದ ಕೆಲವು ತಿಂಗಳಿನಿಂದ ಚಂದ್ರಶೇಖರನ್ ಹಾಗೂ ಟಾಟಾ ಸನ್ಸ್‌ನಲ್ಲಿ ಶೇಕಡ 66% ಪಾಲನ್ನು ಹೊಂದಿರುವ 'ಟಾಟಾ ಟ್ರಸ್ಟ್ಸ್' ಮಧ್ಯೆ ಹಲವು ಭಿನ್ನಾಭಿಪ್ರಾಯಗಳು ಏರ್ಪಟ್ಟಿದ್ದವು.
ಟಾಟಾ ಕಂಪನಿ ಷೇರುಗಳು ಕುಸಿತ:
ಚಂದ್ರಶೇಖರನ್ ರಾಜೀನಾಮೆ ಬಳಿಕ, ಟಾಟಾದ ವಿವಿಧ ಕಂಪನಿಗಳ ಷೇರುಗಳು ದಿಢೀರನೇ ಕುಸಿತ ಕಂಡವು.
ಟಾಟಾ ಪವರ್ 1.26%, ಟಿಸಿಎಸ್ 3.9%, ಟಾಟಾ ಸ್ಟೀಲ್ 1.83%, ಟಾಟಾ ಮೋಟಾರ್ಸ್ 2.47%, ತೇಜಸ್ ನೆಟ್‌ವರ್ಕ್ಸ್ 2.34%, ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ 1.81%, ಟಾಟಾ ಕಮ್ಯುನಿಕೇಷನ್ಸ್ 1.63% ಹಾಗೂ ಟಾಟಾ ಟೆಲಿಸರ್ವಿಸಸ್ 1.24% ಇಳಿಕೆಯಾಗಿದೆ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.