Today Gold Price: ಚಿನ್ನದ ಬೆಲೆ ಇಳಿಕೆ
Today Gold Price: ಚಿನಿವಾರ ಪೇಟೆಯಲ್ಲಿ ಇಂದು (ಶುಕ್ರವಾರ) ಚಿನ್ನದ ದರ ಇಳಿಕೆಯಾಗಿದ್ದು, ಬೆಳ್ಳಿ ಬೆಲೆಯೂ ಯಾವುದೇ ರೀತಿಯಲ್ಲಿ ಬದಲಾಗದೆ ಸ್ಥಿರವಾಗಿದೆ.
ಬೆಂಗಳೂರು: ಶ್ರಾವಣ ಮಾಸ ಆರಂಭಗೊಂಡಿದ್ದು, ಆಭರಣ ಖರೀದಿಸುವವರ ಸಂಖ್ಯೆಯೂ ಅಧಿಕವಾಗಿರುತ್ತದೆ. ಆಷಾಡ ಮಾಸದಲ್ಲಿ ಚಿನ್ನದ ದರವು ಏರಿಕೆ ಹಾದಿಯಲ್ಲಿತ್ತು.
ಆದರೀಗ ಚಿನಿವಾರ ಪೇಟೆಯಲ್ಲಿ ಇಂದು (ಶುಕ್ರವಾರ) ಚಿನ್ನದ ದರ ಇಳಿಕೆಯಾಗಿದ್ದು, ಬೆಳ್ಳಿ ಬೆಲೆಯೂ ಯಾವುದೇ ರೀತಿಯಲ್ಲಿ ಬದಲಾಗದೆ ಸ್ಥಿರವಾಗಿದೆ.
ರಾಜ್ಯದಲ್ಲಿ 24 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ ರೂ.710 ಕಡಿಮೆಯಾಗಿ ರೂ.1,52,890 ಆಗಿದೆ. 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ರೂ.650 ಇಳಿಕೆಯಾಗಿ ರೂ.1,40,150ಕ್ಕೆ ಬಂದಿದೆ. 18 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ ರೂ.530 ಕಡಿಮೆಯಾಗಿ ರೂ.1,14,670 ಆಗಿದೆ. 1 ಕೆಜಿ ಬೆಳ್ಳಿವು ರೂ.2,55,000 ಬೆಲೆಯಲ್ಲಿ ಮಾರಾಟವಾಗುತ್ತಿದೆ.
ಷೇರುಪೇಟೆ: ಆರಂಭಿಕ ವಹಿವಾಟು ಸ್ವಲ್ಪ ಕುಸಿತ:
ಸೆನ್ಸೆಕ್ಸ್ 176.53 ಅಂಕಗಳು ಇಳಿಕೆಯಾಗಿ 77,903.43 ಅಂಕಗಳಿಗೆ ತಲುಪಿದೆ. ನಿಫ್ಟಿ 33.95 ಅಂಕಗಳು ಕುಸಿತವಾಗಿ 24,361.90 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ.
ಬಜಾಜ್ ಫೈನಾನ್ಸ್, ಟಿಸಿಎಸ್, ಟೈಟಾನ್, ಎಟರ್ನಲ್ ಹಾಗೂ ಇನ್ಫೋಸಿಸ್ ಷೇರುಗಳು ಲಾಭದಲ್ಲಿವೆ. ಅದೇ ರೀತಿಯಲ್ಲಿ ಟ್ರೆಂಟ್, ಪವರ್ ಗ್ರಿಡ್, ಇಂಡಿಗೊ, ಟಾಟಾ ಸ್ಟೀಲ್ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಷೇರುಗಳು ನಷ್ಟದಲ್ಲಿವೆ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್ನಿಂದ ಹಿಡಿದು ಇನ್ಸ್ಟಾ, ಎಕ್ಸ್, ಫೇಸ್ಬುಕ್, ಯೂಟ್ಯೂಬ್, ನ್ಯೂಸ್ ಆಪ್ವರೆಗೆ ಎಲ್ಲ ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್ಫಾರ್ಮ್ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.