Today Gold Price: ಇಂದಿನ ಚಿನ್ನದ ದರವೆಷ್ಟು?
Today Gold Price: ದೇಶದ ಚಿನಿವಾರ ಪೇಟೆಯಲ್ಲಿ ಇಂದು (ಮಂಗಳವಾರ) ಚಿನ್ನದ ಬೆಲೆ ಅತ್ಯಲ್ಪ ಇಳಿಕೆಯಾಗಿದೆ. ಆದಾಗ್ಯೂ ಪ್ಲಾಟಿನಂ ಏರಿಕೆಯಾಗಿದ್ದು, ಬೆಳ್ಳಿ ದರವು ಸ್ಥಿರವಾಗಿದೆ.
ಬೆಂಗಳೂರು: ದೇಶದ ಚಿನಿವಾರ ಪೇಟೆಯಲ್ಲಿ ಇಂದು (ಮಂಗಳವಾರ) ಚಿನ್ನದ ಬೆಲೆ ಅತ್ಯಲ್ಪ ಇಳಿಕೆಯಾಗಿದೆ. ಆದಾಗ್ಯೂ ಪ್ಲಾಟಿನಂ ಏರಿಕೆಯಾಗಿದ್ದು, ಬೆಳ್ಳಿ ದರವು ಸ್ಥಿರವಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.110 ಇಳಿಕೆಯಾಗಿ ರೂ.1,42,800 ಆಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ರೂ.100 ಕಡಿಮೆಯಾಗಿ ರೂ.1,31,900ಕ್ಕೆ ಬಂದಿದೆ. 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.80 ಇಳಿಕೆಯಾಗಿ ರೂ.1,07,100 ಆಗಿದೆ. 10 ಗ್ರಾಂ ಪ್ಲಾಟಿನಂ ಬೆಲೆ ರೂ.470 ಏರಿಕೆಯಾಗಿ ರೂ.49,430ಕ್ಕೆ ತಲುಪಿದೆ. 1 ಕೆಜಿ ಬೆಳ್ಳಿ ರೂ.2,35,000 ದರದಲ್ಲಿ ಮಾರಾಟವಾಗುತ್ತಿದೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.110 ಕಡಿಮೆಯಾಗಿ ರೂ.1,42,950 ಆಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ರೂ.100 ಇಳಿಕೆಯಾಗಿ ರೂ.1,31,050ಕ್ಕೆ ತಲುಪಿದೆ. 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.80 ಕಡಿಮೆಯಾಗಿ ರೂ.1,07,250 ಆಗಿದೆ. 10 ಗ್ರಾಂ ಪ್ಲಾಟಿನಂ ಬೆಲೆ ರೂ.470 ಹೆಚ್ಚಳವಾಗಿ ರೂ.49,430ಕ್ಕೆ ಬಂದಿದೆ. 1 ಕೆಜಿ ಬೆಳ್ಳಿಯನ್ನು ರೂ.2,35,000 ದರದಲ್ಲಿ ಮಾರಲಾಗುತ್ತಿದೆ.
ವಾಣಿಜ್ಯ ನಗರಿ ಮುಂಬೈನಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.110 ಇಳಿಕೆಯಾಗಿ ರೂ.1,42,800 ಆಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ರೂ.100 ಕಡಿಮೆಯಾಗಿ ರೂ.1,31,900ಕ್ಕೆ ತಲುಪಿದೆ. 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.80 ಇಳಿಕೆಯಾಗಿ ರೂ.1,07,100 ಆಗಿದೆ. 10 ಗ್ರಾಂ ಪ್ಲಾಟಿನಂ ಬೆಲೆ ರೂ.470 ಏರಿಕೆಯಾಗಿ ರೂ.49,430ಕ್ಕೆ ತಲುಪಿದೆ. 1 ಕೆಜಿ ಬೆಳ್ಳಿ ರೂ.2,35,000 ದರದಲ್ಲಿ ಮಾರಾಟವಾಗುತ್ತಿದೆ.
ಷೇರುಪೇಟೆ: ಆರಂಭಿಕ ವಹಿವಾಟು ಕುಸಿತ
ಷೇರುಪೇಟೆಯ ಆರಂಭಿಕ ವಹಿವಾಟು ಕೂಡ ನಕಾರತ್ಮಕವಾಗಿದೆ. ಸೆನ್ಸೆಕ್ಸ್ 391.80 ಅಂಕಗಳು ಅಥವಾ ಶೇಕಡ 0.50% ಇಳಿಕೆಯಾಗಿ 77,224.60 ಅಂಕಗಳಿಗೆ ತಲುಪಿದೆ. ನಿಫ್ಟಿ 99.85 ಅಂಕಗಳು ಅಥವಾ ಶೇಕಡ 0.41% ಕಡಿಮೆಯಾಗಿ 24,111.15 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ.
ಹಿಂಡಾಲ್ಕೊ, ಒಎನ್‌ಜಿಸಿ, ಟಿಸಿಎಸ್, ಇನ್ಫೋಸಿಸ್ ಮತ್ತು ವಿಪ್ರೋ ಷೇರುಗಳು ಲಾಭದಲ್ಲಿವೆ. ಹೆಚ್‌ಸಿಎಲ್ ಟೆಕ್, ಶ್ರೀರಾಮ್ ಫೈನಾನ್ಸ್, ಇಂಟರ್‌ಗ್ಲೋಬ್ ಏವಿಯೇಷನ್ ಹಾಗೂ ಬಜಾಜ್ ಫೈನಾನ್ಸ್ ಷೇರುಗಳು ನಷ್ಟದಲ್ಲಿವೆ.


