ಉಡುಪಿ: ಕೋಟೇಶ್ವರ ಜೋಗಿ ವಿವಿಧೋದ್ದೇಶ ಸಹಕಾರಿ ಸಂಘದ ಸಿಇಒ ಆತ್ಮಹತ್ಯೆ

Udupi: 'ಕೋಟೇಶ್ವರ ಜೋಗಿ ವಿವಿಧೋದ್ದೇಶ ಸಹಕಾರಿ ಸಂಘ'ದ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ರಾಘವೇಂದ್ರ ಜೋಗಿ (48) ನೇಣು ಬಿಗಿದುಕೊಂಡು ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Sep 25, 2026 - 12:00
ಉಡುಪಿ: ಕೋಟೇಶ್ವರ ಜೋಗಿ ವಿವಿಧೋದ್ದೇಶ ಸಹಕಾರಿ ಸಂಘದ ಸಿಇಒ ಆತ್ಮಹತ್ಯೆ

ಉಡುಪಿ: 'ಕೋಟೇಶ್ವರ ಜೋಗಿ ವಿವಿಧೋದ್ದೇಶ ಸಹಕಾರಿ ಸಂಘ'ದ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ರಾಘವೇಂದ್ರ ಜೋಗಿ (48) ನೇಣು ಬಿಗಿದುಕೊಂಡು ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಕಟ್‌ಬೆಲ್ತೂರು ನಿವಾಸಿಯಾಗಿದ್ದ ಅವರು, 18 ವರ್ಷಗಳಿಂದ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದರು. 12:30 ಸುಮಾರಿಗೆ ರಾಘವೇಂದ್ರ ಜೋಗಿ ಮನೆಯ ಹತ್ತಿರದ ಮರಕ್ಕೆ ನೇಣಿಗೆ ಶರಣಾಗಿರುವುದನ್ನು ಕುಟುಂಬಸ್ಥರು ಕಂಡಿದ್ದಾರೆ. ತಕ್ಷಣ ಕುಂದಾಪುರದ 'ಆದರ್ಶ ಆಸ್ಪತ್ರೆ'ಗೆ ಕರೆದೊಯ್ಯಲಾಗಿದೆ. ಅಲ್ಲಿ ವೈದ್ಯರು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. 

ಡೆತ್‌ನೋಟ್‌ ಕೂಡ ಲಭಿಸಿದ್ದು, 'ತನ್ನ ಸಾವಿಗೆ ತಾನೇ ಕಾರಣ' ಎಂದು ಬರೆದುಕೊಂಡಿದ್ದಾರೆ. ಸಹೋದರ ರಾಜೇಶ್‌ ಜೋಗಿ ನೀಡಿರುವ ದೂರಿನ್ವಯ, ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.