Vivekananda College: ಸರ್ಟಿಫಿಕೇಷನ್ ಕುರಿತು ಮಾಹಿತಿ ಕಾರ್ಯಾಗಾರ

Vivekananda College: ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯದ ಸ್ನಾತಕೋತ್ತರ ವಾಣಿಜ್ಯ ವಿಭಾಗ ಮತ್ತು ಐಕ್ಯೂಎಸಿ ಸಹಯೋಗದಲ್ಲಿ 'ಫ್ರಮ್ ಸರ್ಟಿಫಿಕೇಷನ್ ಟು ಕೆರಿಯರ್: ಅಪ್‌ಸ್ಕಿಲ್ಲಿಂಗ್ ಫಾರ್ ಕೆರಿಯರ್ ಸಕ್ಸಸ್' ಎಂಬ ಸರ್ಟಿಫಿಕೇಷನ್ ಕುರಿತಾದ ಮಾಹಿತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.

Sep 25, 2026 - 19:39
Vivekananda College: ಸರ್ಟಿಫಿಕೇಷನ್ ಕುರಿತು ಮಾಹಿತಿ ಕಾರ್ಯಾಗಾರ

ಪುತ್ತೂರು: ಕಾರ್ಪೋರೇಟ್ ಕ್ಷೇತ್ರದಲ್ಲಿ ನಾವು ಆಸಕ್ತಿಯಿಂದ ತೊಡಗಿಸಿಕೊಂಡಾಗ, ಒಳ್ಳೆಯ ಭವಿಷ್ಯವಿದೆ. ಇಲ್ಲಿ ಸದಾ ಬದಲಾಗುವ ಕಾರ್ಯತಂತ್ರಗಳ ಬಗ್ಗೆ ನಾವು ಜಾಗೃತರಾಗಬೇಕು ಎಂದು ಕಾಲೇಜಿನ ಹಿರಿಯ ವಿದ್ಯಾರ್ಥಿ ಮತ್ತು ಬೆಂಗಳೂರಿನ ಮೋರ್ಗನ್ ಸ್ಟಾನ್ಲಿ ಸಂಸ್ಥೆಯ ಅಸೋಸಿಯೇಟ್ ನಿರಂಜನ್ ಹೇಳಿದರು.

ಇಲ್ಲಿನ ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯದ ಸ್ನಾತಕೋತ್ತರ ವಾಣಿಜ್ಯ ವಿಭಾಗ ಮತ್ತು ಐಕ್ಯೂಎಸಿ ಸಹಯೋಗದಲ್ಲಿ 'ಫ್ರಮ್ ಸರ್ಟಿಫಿಕೇಷನ್ ಟು ಕೆರಿಯರ್: ಅಪ್‌ಸ್ಕಿಲ್ಲಿಂಗ್ ಫಾರ್ ಕೆರಿಯರ್ ಸಕ್ಸಸ್' ಎಂಬ ಸರ್ಟಿಫಿಕೇಷನ್ ಕುರಿತಾದ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಅವರು ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ಪಠ್ಯ ವಿಷಯಗಳ ಕಲಿಕೆಯೊಂದಿಗೆ, ಅದಕ್ಕೆ ಹೊರತಾದ ಅನೇಕ ಕೌಶಲ್ಯಗಳನ್ನು ಕಲಿಯುವುದು ಬಹುಮುಖ್ಯ. ನಮ್ಮ ಕಾರ್ಯಕ್ಷೇತ್ರಕ್ಕೆ ಸಂಬಂಧಿಸಿದಂತೆ, ಸರ್ಟಿಫಿಕೇಟ್ ಕೋರ್ಸ್ ಮಾಡುವುದು ನಮ್ಮ ವೃತ್ತಿ ಜೀವನದಲ್ಲಿ ಉಪಯೋಗವಾಗಬಲ್ಲದು ಎಂದರು.

ಸ್ನಾತಕೋತ್ತರ ವಿಭಾಗದ ಡೀನ್ ಡಾ.ವಿಜಯಸರಸ್ವತಿ ಬಿ ಪ್ರಾಸ್ತಾವಿಕವಾಗಿ ಮಾತನಾಡಿ, ಶುಭಹಾರೈಸಿದರು. ವೇದಿಕೆಯಲ್ಲಿ ವಿದ್ಯಾರ್ಥಿನಿಯರಾದ ಸ್ವರ್ಣ ಮತ್ತು ಅನಘ ಉಪಸ್ಥಿತರಿದ್ದರು.

ಪ್ರಥಮ ಎಂಕಾಂ ವಿದ್ಯಾರ್ಥಿನಿ ವಂಶಿ ಸ್ವಾಗತಿಸಿದರು. ಪ್ರತೀಕ್ಷಾ ಯು.ಕೆ ವಂದಿಸಿದರು. ಪ್ರಥಮ ಎಂಕಾಂ ವಿದ್ಯಾರ್ಥಿ ಅಭಯಕೃಷ್ಣ ಟಿ ನಿರೂಪಿಸಿದರು.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.