Vivo S2: ಇಂದಿನಿಂದ 'ವಿವೋ ಎಸ್2' ಫೋನ್‌ ಮಾರಾಟ ಶುರು

Vivo S2: ಇಂದಿನಿಂದ (ಮಂಗಳವಾರ) ನೂತನ ವಿವೋ ಎಸ್ ಸ್ಮಾರ್ಟ್‌ಫೋನ್‌ ಮಾರಾಟವು ಆರಂಭಗೊಂಡಿದೆ.

Aug 11, 2026 - 19:16
Vivo S2: ಇಂದಿನಿಂದ 'ವಿವೋ ಎಸ್2' ಫೋನ್‌ ಮಾರಾಟ ಶುರು

ನೂತನ ವಿವೋ ಎಸ್2 (Vivo S2) ಸ್ಮಾರ್ಟ್‌ಫೋನ್‌ ಈಚೆಗೆ ಬಿಡುಗಡೆಯಾಗಿತ್ತು. ಇಂದಿನಿಂದ (ಮಂಗಳವಾರ) ಈ ಫೋನ್ ಮಾರಾಟವು ಶುರುವಾಗಲಿದೆ. ಆಸಕ್ತ ಗ್ರಾಹಕರು ವಿವೋ ವೆಬ್‌ಸೈಟ್, ಫ್ಲಿಪ್‌ಕಾರ್ಟ್ & ಅಮೆಜಾನ್ ಪ್ಲಾಟ್‌ಫಾರ್ಮ್‌ಗೆ ಭೇಟಿ ನೀಡಿ, ಖರೀದಿಸಬಹುದು. 

ಇದು 8GB RAM + 128GB ಹಾಗೂ 8GB RAM + 256GB ಇಂಟರ್ನಲ್ ಸ್ಟೋರೇಜ್‌ನ್ನು ಒಳಗೊಂಡಿದ್ದು,  ಕ್ರಮವಾಗಿ 39,999 ರಿಂದ ರೂ.44,999 ದರವನ್ನು ಹೊಂದಿದೆ. ಹಲವು ಆಫರ್‌ಗಳು ಲಭ್ಯವಿವೆ.

6.83-ಇಂಚಿನ ಕರ್ವ್ಡ್ AMOLED ಡಿಸ್‌ಪ್ಲೇ ಇದ್ದು, 1.5K ಅಲ್ಟ್ರಾ ಹೆಚ್‌ಡಿ ರೆಸಲ್ಯೂಶನ್ ಹಾಗೂ 120 Hz ರಿಫ್ರೆಶ್ ರೇಟ್ ಅನ್ನು ಪಡೆದಿದೆ.  ಡ್ಯುಯಲ್ ಸ್ಪೀಕರ್‌ಗಳನ್ನು ತನ್ನದಾಗಿಸಿಕೊಂಡಿದೆ. 

ಈ ಫೋನ್ 7,050mAh ಬ್ಲೂವೋಲ್ಟ್ ಬ್ಯಾಟರಿಯನ್ನು ಹೊಂದಿದೆ. 44W ಫ್ಲ್ಯಾಶ್‌ಚಾರ್ಜ್ ಆಯ್ಕೆಯನ್ನು ಬೆಂಬಲಿಸಿಸುತ್ತದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 7360-ಟರ್ಬೊ ಪ್ರೊಸೆಸರ್‌ನ್ನು ಒಳಗೊಂಡಿದೆ.

50MP ಸೋನಿ ಮೇನ್ ಸೆನ್ಸರ್ ಕ್ಯಾಮೆರಾ ಮತ್ತು 32 MP ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ. ಸಿಲ್ಕ್ ವೈಟ್, ಸಫೈರ್ ಬ್ಲೂ ಮತ್ತು ರೀಗಲ್ ಬ್ರಾನ್ಜ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.