Today Gold Price: ಆಭರಣ ಪ್ರಿಯರಿಗೆ ಭರ್ಜರಿ ಗುಡ್ನ್ಯೂಸ್ ದೊರೆತಿದೆ. ಚಿನಿವಾರ ಪೇಟೆಯಲ್ಲಿ ಇಂದು (ಬುಧವಾರ) ಚಿನ್ನದ ದರ ಇಳಿಕೆಯಾಗಿದೆ. ಆದಾಗ್ಯೂ ಬೆಳ್ಳಿ ಬೆಲೆಯು ಸ್ಥಿರವಾಗಿದೆ.
ರಾಜ್ಯದಲ್ಲಿ (ಬೆಂಗಳೂರು) 24 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ ರೂ.1,030 ಕಡಿಮೆಯಾಗಿ ರೂ.1,48,260 ಇದೆ. 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ರೂ.950 ಇಳಿಕೆಯಾಗಿ ರೂ.1,350,900ಕ್ಕೆ ಬಂದಿದೆ. 18 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ ರೂ.780 ಕಡಿಮೆಯಾಗಿ ರೂ.1,11,190 ಆಗಿದೆ.
ಅದೇ ರೀತಿಯಲ್ಲಿ 1 ಕೆಜಿ ಬೆಳ್ಳಿ ರೂ.2,35,000 ದರದಲ್ಲಿ ಗ್ರಾಹಕರ ಖರೀದಿಗೆ ಸಿಗುತ್ತದೆ.
ಷೇರುಪೇಟೆ: ಸಕಾರಾತ್ಮಕ ವಹಿವಾಟು
ಭಾರತದ ಷೇರುಪೇಟೆ ವಹಿವಾಟು ಇಂದು ಸಕಾರಾತ್ಮಕವಾಗಿದೆ. ಬಿಎಸ್ಇ ಸೆನ್ಸೆಕ್ಸ್ 15.98 ಅಂಕಗಳು ಏರಿಕೆಯಾಗಿ 73,049.76 ಅಂಕಗಳಿಗೆ ತಲುಪಿದೆ. ನಿಫ್ಟಿ 6.20 ಅಂಕಗಳು ಇಳಿಕೆಯಾಗಿ 22,715.75 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ.
ಟಿಸಿಎಸ್, ಎಚ್ಸಿಎಲ್ ಟೆಕ್, ಇನ್ಫೋಸಿಸ್, ಟೆಕ್ ಮಹೀಂದ್ರಾ ಮತ್ತು ಬಿಇಎಲ್ ಷೇರುಗಳು ಲಾಭದಲ್ಲಿವೆ. ಪವರ್ ಗ್ರಿಡ್, ಎಲ್&ಟಿ, ಎಟರ್ನಲ್, ಟೈಟಾನ್ ಹಾಗೂ ಬಜಾಜ್ ಫೈನಾನ್ಸ್ ಷೇರುಗಳು ನಷ್ಟದಲ್ಲಿವೆ.