KEA: ಆಯುರ್ವೇದ & ಹೋಮಿಯೋಪತಿ ಕೋರ್ಸ್‌ಗಳ ಅಣಕು ಫಲಿತಾಂಶ ಪ್ರಕಟ

KEA: ಯುಜಿನೀಟ್-2026ರ ಆಯುರ್ವೇದ & ಹೋಮಿಯೋಪತಿ ಕೋರ್ಸ್‌ಗಳ ಮೊದಲ ಸುತ್ತಿನ ಸೀಟು ಹಂಚಿಕೆ ಅಣಕು ಫಲಿತಾಂಶವನ್ನು ಕೆಇಎ ಸೋಮವಾರ ಪ್ರಕಟಿಸಿದೆ.

Oct 13, 2026 - 19:33
KEA: ಆಯುರ್ವೇದ & ಹೋಮಿಯೋಪತಿ ಕೋರ್ಸ್‌ಗಳ ಅಣಕು ಫಲಿತಾಂಶ ಪ್ರಕಟ

ಬೆಂಗಳೂರು: ಯುಜಿನೀಟ್-2026ರ ಆಯುರ್ವೇದ & ಹೋಮಿಯೋಪತಿ ಕೋರ್ಸ್‌ಗಳ ಮೊದಲ ಸುತ್ತಿನ ಸೀಟು ಹಂಚಿಕೆ ಅಣಕು ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸೋಮವಾರ ಪ್ರಕಟಿಸಿದೆ.

ಅಣಕು ಸೀಟು ಹಂಚಿಕೆಯ ಫಲಿತಾಂಶ ಪರಿಶೀಲಿಸಿದ ನಂತರ ಅ.14 ರಂದು ಬೆಳಗ್ಗೆ 11 ಗಂಟೆವರೆಗೆ ಅವಶ್ಯವಿದ್ದಲ್ಲಿ ಆಯ್ಕೆಗಳನ್ನು ಬದಲಿಸಿಕೊಳ್ಳಲು/ಹೊಸದಾಗಿ ಸೇರಿಸಲು/ಅಳಿಸಲು ಕೂಡ ಅವಕಾಶ ನೀಡಲಾಗಿದೆ. ಅಲ್ಲದೆ, ಇದುವರೆಗೂ ಇಚ್ಛೆ/ಆಯ್ಕೆಗಳನ್ನು ದಾಖಲಿಸದೇ ಇರುವವರು ಕೂಡ ದಾಖಲಿಸಬಹುದು.

ಈ ಪ್ರಕ್ರಿಯೆ ನಂತರವೇ ಮೊದಲ ಸುತ್ತಿನ ನೈಜ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಿಸಲಾಗುತ್ತದೆ. ಅಣಕು ಫಲಿತಾಂಶದ ಪಟ್ಟಿಗೆ ಈ ಕೆಳಗಿನ 'ಲಿಂಕ್'ನ್ನು ಕ್ಲಿಕ್ ಮಾಡಿರಿ.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.