ಹಿತ್ತಲ ಗಿಡ ಮದ್ದು: ಲ್ಯಾವೆಂಡರ್.. ಇದರ ಉಪಯೋಗಗಳೇನು?

Lavender: ಇದೊಂದು ಸುಗಂಧಭರಿತ ಔಷಧೀಯ ಮೂಲಿಕೆವಾಗಿದ್ದು, ಹತ್ತಾರು ಪ್ರಯೋಜನಗಳನ್ನು ಹೊಂದಿದೆ.

Aug 11, 2026 - 11:40
ಹಿತ್ತಲ ಗಿಡ ಮದ್ದು: ಲ್ಯಾವೆಂಡರ್.. ಇದರ ಉಪಯೋಗಗಳೇನು?

ಲ್ಯಾವೆಂಡರ್ (Lavender) ಒಂದು ಸುಗಂಧಭರಿತ ಔಷಧೀಯ ಮೂಲಿಕೆ. ಇದರ ಮೂಲ ಮೆಡಿಟರೇನಿಯನ್ ಪ್ರದೇಶವಾಗಿದ್ದು, ನೇರಳೆ ಬಣ್ಣದ ಹೂವುಗಳು ನೋಡಲು ಅತ್ಯಂತ ಆಕರ್ಷಕವಾಗಿ ಕಾಣುತ್ತದೆ. ಲ್ಯಾವೆಂಡರ್ ಎಣ್ಣೆಯನ್ನು ಅರೋಮಾಥೆರಪಿಯಲ್ಲಿ ಹೆಚ್ಚಾಗಿ ಬಳಸುತ್ತಾರೆ. 

ಇದು ಮಾನಸಿಕ ಒತ್ತಡ, ನಿದ್ರಾಹೀನತೆ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರ ಪರಿಮಳ ಮನಸ್ಸಿಗೆ ಶಾಂತಿ ನೀಡುತ್ತದೆ. ಲ್ಯಾವೆಂಡರ್ ಚರ್ಮದ ಗಾಯ, ಮೊಡವೆ & ಕೀಟ ಕಡಿತಕ್ಕೆ ಉಪಯುಕ್ತವಾಗಿದೆ. ಚಹಾ, ಸಾಬೂನು ಮತ್ತು ಸುಗಂಧ ದ್ರವ್ಯಗಳಲ್ಲಿ ಬಳಸುತ್ತಾರೆ. 

ಮನೆಯಲ್ಲಿ ಬೆಳೆಸಲು ಸುಲಭ ಹಾಗೂ ಸೊಳ್ಳೆಗಳನ್ನು ದೂರವಿಡುತ್ತದೆ. ಇದು ಬಹುವಾರ್ಷಿಕ ಸಸ್ಯವಾಗಿದ್ದು ಬಿಸಿಲು ಮತ್ತು ಕಡಿಮೆ ನೀರಿನಲ್ಲಿ ಚೆನ್ನಾಗಿ ಬೆಳೆಯುತ್ತದೆ. ಇದರ ಒಣಗಿದ ಹೂವುಗಳನ್ನು ಬಟ್ಟೆಗಳ ಮಧ್ಯೆ ಇಟ್ಟರೆ ಸುಗಂಧ ಬರುತ್ತದೆ. ಆಯುರ್ವೇದದಲ್ಲಿಯೂ ಇದಕ್ಕೆ ಮಹತ್ವವಿದೆ. ಆರೋಗ್ಯ ಮತ್ತು ಸೌಂದರ್ಯಕ್ಕೂ ವರದಾನವಾಗಿದೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.