ಬೆಂಗಳೂರು: ಆಷಾಢ ಮಾಸ ಮುಕ್ತಾಯವಾಗುತ್ತಿದ್ದು, ಶ್ರಾವಣ ಮಾಸ ಶುರುವಾಗುತ್ತಿದೆ. ಈ ಹೊತ್ತಿನಲ್ಲೇ ಆಭರಣದ ಬೆಲೆ ಮಾತ್ರ ಗಗನಕ್ಕೆ ಏರಿಕೆಯಾಗುತ್ತಿದೆ. ಇದು ಗ್ರಾಹಕರ ಜೇಬಿಗೂ ಹೊರೆಯಾಗುತ್ತಿದೆ.
ಚಿನಿವಾರ ಪೇಟೆಯಲ್ಲಿ ಇಂದು (ಬುಧವಾರ) ಚಿನ್ನದ ದರ ಹೆಚ್ಚಳವಾಗಿದೆ. ಆದಾಗ್ಯೂ ಬೆಳ್ಳಿ ಬೆಲೆ ಮಾತ್ರ ಸ್ಥಿರವಾಗಿದೆ.
ರಾಜ್ಯದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.1,040 ಏರಿಕೆಯಾಗಿ ರೂ.1,54,860 ಆಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ರೂ.950 ಹೆಚ್ಚಳವಾಗಿ ರೂ.1,41,950ಕ್ಕೆ ಬಂದಿದೆ. 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.770 ಏರಿಕೆಯಾಗಿ ರೂ.1,16,350 ಆಗಿದೆ. ಅದೇ ರೀತಿಯಲ್ಲಿ 1 ಕೆಜಿ ಬೆಳ್ಳಿವು ರೂ.2,55,000 ಬೆಲೆಯಲ್ಲಿ ಮಾರಾಟವಾಗುತ್ತಿದೆ.
ಷೇರುಪೇಟೆ: ಆರಂಭಿಕ ವಹಿವಾಟು ಕುಸಿತ:
ಸೆನ್ಸೆಕ್ಸ್ 557.50 ಅಂಕಗಳು ಅಥವಾ ಶೇಕಡ 0.71% ಕುಸಿದು 77,596.75 ಅಂಕಗಳಲ್ಲಿ ತಲುಪಿದೆ. ನಿಫ್ಟಿ 172.00 ಅಂಕಗಳು ಅಥವಾ ಶೇಕಡ 0.70% ಇಳಿಕೆಯಾಗಿ ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ.
ಟೆಕ್ ಮಹೀಂದ್ರಾ, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಹೆಚ್‌ಸಿಎಲ್ ಟೆಕ್ ಷೇರುಗಳು ಲಾಭದಲ್ಲಿವೆ. ಮತ್ತೊಂದೆಡೆ, ಎಂ & ಎಂ, ಕೋಟಕ್ ಬ್ಯಾಂಕ್, ಎಲ್ & ಟಿ, ಟೈಟಾನ್ ಹಾಗೂ ಬಜಾಜ್ ಫೈನಾನ್ಸ್ ಷೇರುಗಳು ನಷ್ಟದಲ್ಲಿವೆ.