ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಮಾಡಿದ ಸಿನಿಮಾದ ನಿರ್ದೇಶಕನ ಕಾರು
ಅವರು ಬೇರೆ ಯಾರೂ ಅಲ್ಲ ನಾಗ್ ಅಶ್ವಿನ್.
‘ಕಲ್ಕಿ 2898 ಎಡಿ’ ಅಂತಹ ಹಿಟ್ ಸಿನಿಮಾ ನೀಡಿದ ನಾಗ್ ಅಶ್ವಿನ್ ಅವರು ಈಗ ಸಿಂಪಲ್ ಆಗಿ ಜೀವನ ನಡೆಸುತ್ತಿದ್ದಾರೆ. ಈ ಸಿನಿಮಾ ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಮಾಡಿದರೂ ಯಶಸ್ಸು ಅವರ ತೆಲೆಗೆ ಏರಿಲಿಲ್ಲ. ಅವರು ಪುಟಾಣಿ ಕಾರಿನಲ್ಲಿ ಓಡಾಟ ನಡೆಸುತ್ತಿದ್ದಾರೆ. ನಾಗ್ ಅಶ್ವಿನ್ ಅವರು ಮಹಿಂದ್ರಾ ಎಲೆಕ್ಟ್ರಿಕ್ ಕಾರು e2oplus ಕಾರ್ನ ಚಲಾಯಿಸಿಕೊಂಡು ಹೋಗಿದ್ದಾರೆ. ಅವರದ್ದೇ ಮನೆಯ ಸೋಲಾರ್ ಪ್ಯಾನಲ್ ಮೂಲಕ ಉತ್ಪಾದನೆಯಾದ ವಿದ್ಯುತ್ನಿಂದ ಕಾರನ್ನು ಚಾರ್ಜ್ ಮಾಡಲಾಗಿದೆ. ಇನ್ಸ್ಟಾಗ್ರಾಮ್ನಲ್ಲಿ ಅವರು ಈ ಬಗ್ಗೆ ಬರೆದುಕೊಂಡಿದ್ದಾರೆ. ಅವರನ್ನು ನೋಡಿ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ.‘ಕಲ್ಕಿ 2898 ಎಡಿ’ ಬಳಿಕ ಸೀಕ್ವೆಲ್ಗೆ ನಾಗ್ ಅಶ್ವಿನ್ ಸಿದ್ಧರಾಗುತ್ತಿದೆ. ಈ ಬಗ್ಗೆ ಫ್ಯಾನ್ಸ್ಗೆ ನಿರೀಕ್ಷೆ ಇದೆ. ಈ ಚಿತ್ರದಲ್ಲಿ ಪ್ರಮುಖ ಕಲಾವಿದರು ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್ ನಟಿಸಿದ್ದರು. ಕಮಲ್ ಹಾಸನ್ ಈ ಚಿತ್ರದ ವಿಲನ್ ಆಗಲಿದ್ದಾರೆ. ಈ ವರ್ಷದ ಕೊನೆಯಲ್ಲಿ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. ದೀಪಿಕಾಗೆ ಮಗು ಜನಿಸಿರುವುದರಿಂದ ಮುಂದಿನ ವರ್ಷ ಅವರು ಸೆಟ್ ಸೇರಲಿದ್ದಾರೆ.