ಹಿತ್ತಲ ಗಿಡ ಮದ್ದು: ಓರೆಗಾನೊ.. ಉಪಯೋಗಗಳೇನು?

Oregano: 'ಓರೆಗಾನೊ' ಒಂದು ಸುಗಂಧಭರಿತ ಮೂಲಿಕೆ ಸಸ್ಯವಾಗಿದ್ದು, ಅಡುಗೆ ಮತ್ತು ಆಯುರ್ವೇದ ಔಷಧದಲ್ಲಿ ಪ್ರಮುಖ ಸ್ಥಾನ ಪಡೆದಿದೆ.

Aug 10, 2026 - 11:57
ಹಿತ್ತಲ ಗಿಡ ಮದ್ದು: ಓರೆಗಾನೊ.. ಉಪಯೋಗಗಳೇನು?

ಓರೆಗಾನೊ (Oregano) ಒಂದು ಸುಗಂಧಭರಿತ ಮೂಲಿಕೆ ಸಸ್ಯವಾಗಿದೆ. ಅಡುಗೆ ಮತ್ತು ಆಯುರ್ವೇದ ಔಷಧದಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಇದು ಪುದೀನಾ ಕುಟುಂಬಕ್ಕೆ ಸೇರಿದ್ದು, ಮೂಲತಃ ಮೆಡಿಟರೇನಿಯನ್ ಪ್ರದೇಶದ ಸಸ್ಯವಾಗಿದೆ. ಸಣ್ಣ ಹಸಿರು ಎಲೆಗಳು, ತೀಕ್ಷ್ಣ ಪರಿಮಳ ಹಾಗೂ ಸ್ವಲ್ಪ ಖಾರದ ರುಚಿಯನ್ನು ಹೊಂದಿದೆ. 
 
ಪಿಜ್ಜಾ, ಪಾಸ್ತಾ, ಸಲಾಡ್ & ಸೂಪ್‌ಗಳಲ್ಲಿ ಇದನ್ನು ಹೆಚ್ಚಾಗಿ ಬಳಸುತ್ತಾರೆ. ಆಂಟಿಆಕ್ಸಿಡೆಂಟ್, ಆಂಟಿಬ್ಯಾಕ್ಟೀರಿಯಲ್, ಆಂಟಿಫಂಗಲ್ ಗುಣಗಳಿದ್ದು, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಶೀತ - ಕೆಮ್ಮನ್ನು ನಿವಾರಿಸುತ್ತದೆ. 
 
ಇದರ ಎಣ್ಣೆ ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ಮನೆಯ ಬಾಲ್ಕನಿ & ಕುಂಡದಲ್ಲಿ ಸುಲಭವಾಗಿ ಬೆಳೆಸಬಹುದು. ವರ್ಷಪೂರ್ತಿ ತಾಜಾ ಎಲೆ ಪಡೆಯಬಹುದು. ಅಡುಗೆಗೆ ವಿಶೇಷ ರುಚಿ ನೀಡುತ್ತದೆ.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.