Today Gold Price: ಆಭರಣ ಪ್ರಿಯರಿಗೆ ಭರ್ಜರಿ ಸಿಹಿಸುದ್ದಿ ಲಭ್ಯವಾಗಿದೆ. ಚಿನಿವಾರ ಪೇಟೆಯಲ್ಲಿ ಇಂದು (ಗುರುವಾರ) ಚಿನ್ನ ಹಾಗೂ ಬೆಳ್ಳಿ ಬೆಲೆಗಳು ಇಳಿಕೆಯಾಗಿವೆ.
ರಾಜ್ಯದಲ್ಲಿ (ಬೆಂಗಳೂರು) 24 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ ರೂ.820 ಕಡಿಮೆಯಾಗಿ ರೂ.1,47,440 ಇದೆ. 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ರೂ.750 ಇಳಿಕೆಯಾಗಿ ರೂ.1,350,150ಕ್ಕೆ ಬಂದಿದೆ. 18 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ ರೂ.610 ಕಡಿಮೆಯಾಗಿ ರೂ.1,10,580 ಆಗಿದೆ.
ಅದೇ ರೀತಿಯಲ್ಲಿ 1 ಕೆಜಿ ಬೆಳ್ಳಿ ರೂ.5,000 ಇಳಿಕೆಯಾಗಿ ರೂ.2,30,000 ದರದಲ್ಲಿ ಗ್ರಾಹಕರ ಖರೀದಿಗೆ ಸಿಗುತ್ತದೆ.
ಷೇರುಪೇಟೆ: ಸಕಾರತ್ಮಕ ವಹಿವಾಟು
ಭಾರತದ ಷೇರುಪೇಟೆ ವಹಿವಾಟು ಇಂದು ಸಕಾರತ್ಮಕವಾಗಿದೆ. ಬಿಎಸ್ಇ ಸೆನ್ಸೆಕ್ಸ್ 183.91 ಅಂಕಗಳು ಏರಿಕೆಯಾಗಿ 72,965.80 ಅಂಕಗಳಿಗೆ ತಲುಪಿದಿದೆ. ನಿಫ್ಟಿ 48.60 ಅಂಕಗಳು ಹೆಚ್ಚಳವಾಗಿ 22,671.30 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ.
ಟಿಸಿಎಸ್, ಎಂ&ಎಂ, ಹೆಚ್ಸಿಎಲ್ ಟೆಕ್, ಟೆಕ್ ಮಹೀಂದ್ರಾ ಹಾಗೂ ರಿಲಯನ್ಸ್ ಷೇರುಗಳು ಲಾಭದಲ್ಲಿವೆ. ಸನ್ ಫಾರ್ಮಾ, ಪವರ್ ಗ್ರಿಡ್, ಬಜಾಜ್ ಫೈನಾನ್ಸ್, ಇಂಡಿಗೋ ಮತ್ತು ಎನ್ಟಿಪಿಸಿ ಷೇರುಗಳು ನಷ್ಟದಲ್ಲಿವೆ.