ಮೀರತ್‌ 'ಬ್ಲೂ ಡ್ರಮ್' ಕೇಸ್: ಮುಸ್ಕಾನ್ & ಪ್ರಿಯಕರ ಸಾಹಿಲ್ ಶುಕ್ಲಾಗೆ ಮರಣದಂಡನೆ

Meerut 'Blue Drum' Case: ಮೀರತ್‌ನ 'ಬ್ಲೂ ಡ್ರಮ್' ಕೇಸ್‌ನಲ್ಲಿ ಪತಿ ಸೌರಭ್ ರಜಪೂತ್‌ನನ್ನು ಕೊಲೆ ಮಾಡಿದ್ದ ಆರೋಪದ ಮೇಲೆ, ಜಿಲ್ಲಾ ನ್ಯಾಯಾಲಯವು ಪತ್ನಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾಗೆ ಮರಣದಂಡನೆ ಶಿಕ್ಷೆ ವಿಧಿಸಿದೆ.

Oct 14, 2026 - 17:40
ಮೀರತ್‌ 'ಬ್ಲೂ ಡ್ರಮ್' ಕೇಸ್: ಮುಸ್ಕಾನ್ & ಪ್ರಿಯಕರ ಸಾಹಿಲ್ ಶುಕ್ಲಾಗೆ ಮರಣದಂಡನೆ

ನವದೆಹಲಿ: ಉತ್ತರ ಪ್ರದೇಶದ ಮೀರತ್‌ನ 'ಬ್ಲೂ ಡ್ರಮ್' ಕೇಸ್‌ನಲ್ಲಿ ಪತಿ ಸೌರಭ್ ರಜಪೂತ್‌ನನ್ನು ಕೊಲೆ ಮಾಡಿದ್ದ ಆರೋಪದ ಮೇಲೆ, ಇಲ್ಲಿನ ಜಿಲ್ಲಾ ನ್ಯಾಯಾಲಯ ಬುಧವಾರ ಪತ್ನಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾಗೆ ಮರಣದಂಡನೆ ಶಿಕ್ಷೆ ವಿಧಿಸಿದೆ. 

ಜಿಲ್ಲಾ ನ್ಯಾಯಾಧೀಶ ಅರವಿಂದ್ ಕುಮಾರ್ ಮಿಶ್ರಾ ಅವರು, ಶಿಕ್ಷೆಯನ್ನು ಪ್ರಕಟಿಸಿದರು. ಮುಸ್ಕಾನ್ ಮತ್ತು ಸಾಹಿಲ್ ಇಬ್ಬರನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.

ಮಾಜಿ ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಜಪೂತ್, ಹತ್ಯೆ ಪ್ರಕರಣದಲ್ಲಿ ಮುಸ್ಕಾನ್ ಹಾಗೂ ಸಾಹಿಲ್ ಶುಕ್ಲಾನನ್ನು ಸೆ.30 ರಂದು ತಪ್ಪಿತಸ್ಥರೆಂದು ತೀರ್ಪು ನೀಡಲಾಗಿತ್ತು. 

ಸೌರಭ್ ರಜಪೂತ್ ಮೃತದೇಹವು ಅವರದ್ದೇ ಮನೆಯಲ್ಲಿದ್ದ ನೀಲಿ ಬಣ್ಣದ ಡ್ರಮ್‌ನಲ್ಲಿ ಬಚ್ಚಿಡಲಾಗಿತ್ತು.

ಮಾ.17, 2025 ರಲ್ಲಿ ಈ ಕೇಸ್ ನ್ಯಾಯಾಲಯದ ಮೆಟ್ಟಿಲೇರಿತ್ತು. ಮಾ.19 ರಂದು ಮುಸ್ಕಾನ್ ಮತ್ತು ಸಾಹಿಲ್ ಶುಕ್ಲಾಗೆ ಮೀರತ್ ಜೈಲಿಗೆ ಕಳುಹಿಸಲಾಯಿತು. 

2025ರ ಜುಲೈನಲ್ಲಿ ಈ ಪ್ರಕರಣದ ವಿಚಾರಣೆಯನ್ನು ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು. 13 ತಿಂಗಳು ವಾದ - ಪ್ರತಿವಾದಗಳು ನಡೆದಿದ್ದು, 22ಕ್ಕೂ ಮಂದಿ ಸಾಕ್ಷಿ ನುಡಿದಿದ್ದಾರೆ.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.