ಪುತ್ತೂರು: 'ದಿ ಹೌಸ್ ಆಫ್ ಆರಾಧನಾ' ಕಲಾಕೃತಿ ಸಂಸ್ಥೆಗೆ ಚಾಲನೆ

Puttur: ಇಲ್ಲಿನ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ 'ದಿ ಹೌಸ್ ಆಫ್ ಆರಾಧನಾ' ಸಂಸ್ಥೆಯ ಶುಭಾರಂಭ & ಕಲಾಕೃತಿಗಳ ಅನಾವರಣ ಸಮಾರಂಭವು ನಡೆಯಿತು.

Oct 14, 2026 - 20:45
Oct 14, 2026 - 20:46
ಪುತ್ತೂರು: 'ದಿ ಹೌಸ್ ಆಫ್ ಆರಾಧನಾ' ಕಲಾಕೃತಿ ಸಂಸ್ಥೆಗೆ ಚಾಲನೆ

ಪುತ್ತೂರು: ಇಲ್ಲಿನ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಸಾಂಪ್ರದಾಯಿಕ ಆಭರಣ ತಯಾರಿಕಾ ಕಲೆಗೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಿ, ವಿಶಿಷ್ಟ ಕಲಾಕೃತಿಗಳನ್ನು ರೂಪಿಸುವ 'ದಿ ಹೌಸ್ ಆಫ್ ಆರಾಧನಾ' ಸಂಸ್ಥೆಯ ಶುಭಾರಂಭ & ಕಲಾಕೃತಿಗಳ ಅನಾವರಣ ಸಮಾರಂಭವು ನಡೆಯಿತು.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅವರು, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

'ಗಂಗಾಧರ ಆಚಾರ್ಯ ಹಾಗೂ ಅವರ ಮಕ್ಕಳು ಚಿನ್ನದ ಪೆಂಡೆಂಟ್‌ಗಳು, ವಿವಿಧ ಪ್ರತಿಮೆಗಳನ್ನು ತಯಾರಿಸುವುರೊಂದಿಗೆ, ತಮ್ಮ ಕಲಾ ಪ್ರತಿಭೆಯನ್ನು ಮೆರೆದಿದ್ದಾರೆ. ಅವರ ಪರಿಶ್ರಮ ಮತ್ತು ಸೃಜನಶೀಲತೆ ಶ್ಲಾಘನೀಯವಾಗಿದ್ದು, ವಿಶಿಷ್ಟ ಕಲಾಕೃತಿಗಳು ಹೊಸ ಪೀಳಿಗೆಗೆ ನವೀನತೆಯ ಪರಿಚಯ ಮಾಡಿಕೊಡಲಿವೆ. ಸಂಸ್ಥೆಯು ಯಶಸ್ಸು ಸಾಧಿಸಲಿ' ಎಂದು ಹಾರೈಸಿದರು.

ಸಂಸ್ಥೆಯ ಲೋಗೋ ಅನಾವರಣಗೊಳಿಸಿದ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, 'ಸ್ವಉದ್ಯೋಗಕ್ಕೆ ಆದ್ಯತೆ ನೀಡಿ, ತಲೆಮಾರುಗಳಿಂದ ಬಂದ ಆಭರಣ ತಯಾರಿಕಾ ಕಲೆಯನ್ನು ಆಧುನಿಕ ತಂತ್ರಜ್ಞಾನದೊಂದಿಗೆ, ಬೆಸೆದು ಉದ್ಯಮ ಆರಂಭಿಸಿರುವುದು ಅಭಿನಂದನೀಯ. ಇಂತಹ ಪ್ರಯತ್ನಗಳು ಸ್ಥಳೀಯ ಕಲೆಗೆ ಹಾಗೂ ಉದ್ಯಮಶೀಲತೆಗೆ ಪ್ರೋತ್ಸಾಹ ನೀಡಲಿವೆ' ಎಂದು ಹೇಳಿದರು.

ಜಿ.ಎಲ್.ಆಚಾರ್ಯ ಜುವೆಲರ್ಸ್‌ನ ಮಾಲೀಕ ಬಲರಾಮ ಆಚಾರ್ಯ ಕಲಾತ್ಮಕ ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡಿ, 'ವಿಜ್ಞಾನ, ಕಲೆ ಮತ್ತು ತಂತ್ರಜ್ಞಾನದ ಸಮನ್ವಯದೊಂದಿಗೆ ಪ್ರತಿಮೆಗಳನ್ನು ವಿನ್ಯಾಸಗೊಳಿಸಿ ತಯಾರಿಸಿರುವುದು ಒಂದು ಅದ್ಭುತವೇ ಸರಿ. ಪುತ್ತೂರಿಗೆ ಇಂತಹ ಕಲಾತ್ಮಕ ಪ್ರತಿಮೆಗಳನ್ನು ಕೊಡುಗೆಯಾಗಿ ನೀಡಿರುವುದು ನಿಜಕ್ಕೂ ಶ್ಲಾಘನೀಯ. ಕಲಾಕೃತಿಗಳು ಜನಮನ್ನಣೆ ಗಳಿಸಿ, ಸಂಸ್ಥೆ ಮತ್ತಷ್ಟು ಅಭಿವೃದ್ಧಿ ಹೊಂದಲಿ' ಎಂದರು.

ನರಿಮೊಗರು ಮೋಹನ್ ರೈ ಮಾತನಾಡಿ, 'ಗಂಗಾಧರ ಆಚಾರ್ಯ ಮತ್ತು ಅವರ ಮಕ್ಕಳು ತಂದೆಯಿಂದ ಬಂದ ಸಾಂಪ್ರದಾಯಿಕ ಉದ್ಯಮವನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಸಂತಸದ ಸಂಗತಿ' ಎಂದು ತಿಳಿಸಿದರು.

ಪುತ್ತೂರು ನಗರಸಭೆಯ ಮಾಜಿ ಉಪಾಧ್ಯಕ್ಷ ಬಾಲಚಂದ್ರ ಮರೀಲು ಮಾತನಾಡಿ, 'ಆಧುನಿಕ ಕಾಲಘಟ್ಟದಲ್ಲಿ ಸುಂದರವಾದ ಪ್ರತಿಮೆಗಳು ಹಾಗೂ ಆಭರಣಗಳನ್ನು ತಯಾರಿಸುವ ಮೂಲಕ ಸಂಸ್ಥೆಯು ಗಮನ ಸೆಳೆಯುತ್ತಿದೆ. ಉದ್ಯಮವು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಲಿ' ಎಂದು ಹೇಳಿದರು.

ವಿಶ್ವ ಬ್ರಾಹ್ಮಣರ ಸೇವಾ ಸಂಘದ ಪುತ್ತೂರು ಅಧ್ಯಕ್ಷ ಶ್ರೀಧರ ಆಚಾರ್ಯ ಪೆಂಡೆಂಟ್ ಅನಾವರಣಗೊಳಿಸಿ ಶುಭ ಹಾರೈಸಿದರು. 

ಗೀತಾ ಗಂಗಾಧರ ಪ್ರಾರ್ಥಿಸಿದರು. ಗಂಗಾಧರ ಆಚಾರ್ಯ ಸ್ವಾಗತಿಸಿದರು. ರಾಹುಲ್ ಆಚಾರ್ಯ ವಂದಿಸಿದರು. ಹೇಮ ಜಯರಾಮ್ ಕಾರ್ಯಕ್ರಮ ನಿರೂಪಿಸಿದರು.

ಈ ಕಾರ್ಯಕ್ರಮದಲ್ಲಿ ಗಂಗಾಧರ ಆಚಾರ್ಯ, ಗೀತಾ ಗಂಗಾಧರ ಆಚಾರ್ಯ, ರಾಹುಲ್ ಆಚಾರ್ಯ, ಹರ್ಷಿತ್ ಆಚಾರ್ಯ, ಹರ್ಷಿತ್ ಜಿವೆಲರ್ಸ್ ಹಾಗೂ ಹೆಚ್.ಆರ್.ಕ್ರಿಯೇಷನ್ಸ್‌ನ ಪ್ರತಿನಿಧಿಗಳು, ವಿಶ್ವನಾಥ ರೈ, ಭುಜಂಗ ಆಚಾರ್ಯ, ಪರಮೇಶ್ವರ ಆಚಾರ್ಯ, ಬಾಲಕೃಷ್ಣ ಆಚಾರ್ಯ ಹಾಗೂ ಜಯಂತ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.