UGC NET: ಯುಜಿಸಿ ನೆಟ್ ಪರೀಕ್ಷೆಗೆ ಅಧಿಸೂಚನೆ ಬಿಡುಗಡೆ

UGC NET-2026: ಯುಜಿಸಿ-ನೆಟ್ ಡಿಸೆಂಬರ್-2026ರ ಪರೀಕ್ಷೆಗೆ ಅಧಿಸೂಚನೆ ಹೊರಡಿಸಲಾಗಿದೆ.

Oct 14, 2026 - 14:35
UGC NET: ಯುಜಿಸಿ ನೆಟ್ ಪರೀಕ್ಷೆಗೆ ಅಧಿಸೂಚನೆ ಬಿಡುಗಡೆ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA), ಭರ್ಜರಿ ಗುಡ್‌ನ್ಯೂಸ್ ನೀಡಿದೆ. ಯುಜಿಸಿ-ನೆಟ್ ಡಿಸೆಂಬರ್-2026ರ ಪರೀಕ್ಷೆಗೆ ಅಧಿಸೂಚನೆ ಹೊರಡಿಸಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಲಿದೆ. 

ಅಸಿಸ್ಟೆಂಟ್ ಪ್ರೊಫೆಸರ್ ಹಾಗೂ ಜೂನಿಯರ್ ರಿಸರ್ಚ್ ಫೆಲೋಶಿಪ್‌ಗೆ ಅರ್ಹತೆ ಪಡೆಯಲು ಇಚ್ಚಿಸುವ ಸ್ನಾತಕೋತ್ತರ ಪದವೀಧರರು ಅರ್ಜಿ ಹಾಕಬಹುದು. 

ಒಟ್ಟು 87 ವಿಷಯಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಯಲಿದ್ದು, ಡಿ.14 ರಿಂದ ಡಿ.19 ವರೆಗೆ ಪರೀಕ್ಷಾ ದಿನಾಂಕವನ್ನು ನಿಗದಿಪಡಿಸಲಾಗಿದೆ.ಅರ್ಜಿ ಸಲ್ಲಿಕೆಗೆ ಅ.28 ಕಡೆ ದಿನವಾಗಿದೆ. 

ಆದಾಗ್ಯೂ ಅಪ್ಲೈ ಮಾಡದವರೂ, ರೂ.500 ದಂಡ ಮೊತ್ತವನ್ನು ಪಾವತಿಸಿ, ಅ.31 ರೊಳಗೆ  ಅರ್ಜಿ ಹಾಕಬಹುದು.

ಸಾಮಾನ್ಯ ಅಭ್ಯರ್ಥಿಗಳು ರೂ.1150, ಸಾಮಾನ್ಯ ಇಡಬ್ಲ್ಯೂಎಸ್/ ಒಬಿಸಿ ವರ್ಗದವರು ರೂ.600 ಹಾಗೂ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ) ಅಭ್ಯರ್ಥಿಗಳು ರೂ.325 ಶುಲ್ಕವನ್ನು ಪಾವತಿಸಬೇಕು. 

ಹೆಚ್ಚಿನ ಮಾಹಿತಿಗೆ https://ugcnet.nta.nic.in/ನ್ನು ಸಂಪರ್ಕಿಸಿರಿ.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.