Ambika Vidyalaya: ಚೆಸ್ ಪಂದ‍್ಯ, ಅಂಬಿಕಾ ವಿದ‍್ಯಾಲಯ ಸಿಬಿಎಸ್‍ಇ ವಿದ‍್ಯಾರ್ಥಿಗಳಿಗೆ ಬಹುಮಾನ

Ambika Vidyalaya: ಅಂಬಿಕಾ ವಿದ‍್ಯಾಲಯ ಸಿಬಿಎಸ್‍ಇ ಸಂಸ‍್ಥೆಯ ವಿದ‍್ಯಾರ್ಥಿಗಳು, ಕಡಬದ ಸರಸ್ಪತಿ ವಿದ‍್ಯಾಲಯದಲ‍್ಲಿ ಮಂಗಳವಾರ ಜರುಗಿದ ವಿದ‍್ಯಾಭಾರತಿ ಜಿಲ‍್ಲಾ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ್ದಾರೆ.

Jul 17, 2026 - 14:49
Jul 17, 2026 - 14:51
Ambika Vidyalaya: ಚೆಸ್ ಪಂದ‍್ಯ, ಅಂಬಿಕಾ ವಿದ‍್ಯಾಲಯ ಸಿಬಿಎಸ್‍ಇ ವಿದ‍್ಯಾರ್ಥಿಗಳಿಗೆ ಬಹುಮಾನ

ಪುತ‍್ತೂರು: ನಟ‍್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ವಿದ‍್ಯಾಲಯ (Ambika Vidyalaya) ಸಿಬಿಎಸ್‍ಇ ಸಂಸ‍್ಥೆಯ ವಿದ‍್ಯಾರ್ಥಿಗಳು, ಕಡಬದ ಸರಸ್ಪತಿ ವಿದ‍್ಯಾಲಯದಲ‍್ಲಿ ಮಂಗಳವಾರ ಜರುಗಿದ ವಿದ‍್ಯಾಭಾರತಿ ಜಿಲ‍್ಲಾ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ್ದಾರೆ. 

ಬಾಲಕರ ವಿಭಾಗದ ಕಿಶೋರ ವರ್ಗದಲ‍್ಲಿ 10ನೇ ತರಗತಿಯ ಸಾತ‍್ವಿಕ್.ಜಿ ಪ್ರಥಮ ಸ‍್ಥಾನ ಪಡೆದಿದ್ದು, ಬಾಲಕರ ವಿಭಾಗದ ಬಾಲ ವರ್ಗದಲ‍್ಲಿ 7ನೇ ತರಗತಿಯ ಸಂಹಿತ್ ಜೋಸ‍್ಸಿ ಲೋಬೋ ಪ್ರಥಮ ಸ‍್ಥಾನ ಹಾಗೂ 7ನೇ ತರಗತಿಯ ತ್ರಿನಯ್ ರೈ ನಾಲ್ಕನೇ ಸ‍್ಥಾನವನ್ನು ಪಡೆದುಕೊಂಡಿದ್ದಾರೆ.

ಬಾಲಕಿಯರ ವಿಭಾಗದ ಬಾಲ ವರ್ಗದಲ‍್ಲಿ 8ನೇ ತರಗತಿಯ ಶಾಂಭವಿ ರಂಜನ್ 2ನೇ ಸ‍್ಥಾನ ಹಾಗೂ ಸಾನ‍್ವಿ ಜಿ 4ನೇ ಸ‍್ಥಾನ ಮತ್ತು ಕೆ.ಎಂ.ಶಮಿತಾ ಭಟ್ 5ನೇ ಸ್ಥಾನವನ್ನು ಪಡೆದಿದ‍್ದಾರೆ. 

ಬಾಲಕರ ವಿಭಾಗದ ಬಾಲವರ್ಗ ತಂಡ ಪಂದ‍್ಯಾಟದಲ‍್ಲಿ 7ನೇ ತರಗತಿಯ ವಿದ‍್ಯಾರ್ಥಿಗಳಾದ ಸಂಹಿತ್ ಜೋಸ‍್ಸಿ ಲೋಬೋ, ಮಯೂರ್ ಎಸ್ ಮಯ್ಯ, ತ್ರಿನಯ್ ರೈ, ರತುಲ್ ಅದೈತ್, 6ನೇ ತರಗತಿಯ ಹಿಮನೀಶ್ ಗೌಡ ಕೆ ಅವರುಗಳ ತಂಡವು ಗೆದ್ದಿದೆ.

ಬಾಲಕಿಯರ ವಿಭಾಗದ ಬಾಲವರ್ಗ ತಂಡ ಪಂದ‍್ಯಾಟದಲ‍್ಲಿ 8ನೇ ತರಗತಿಯ ಶಾಂಭವಿ ರಂಜನ್, ಸಾನ‍್ವಿ ಜಿ, ನೈನಿಕ ಎ.ಆರ್, ಶಮಿತಾ ಭಟ್ ಕೆ.ಎಂ ಮತ್ತು ಅನನ್ಯ ಬಿ ಅವರಿದ್ದ ತಂಡವು ಜಯಿಸಿದೆ. 

ಉಭಯ ತಂಡಗಳು ಸಮಗ್ರ ಪ್ರಶಸ‍್ತಿ ಗೆದ್ದು, ಪ್ರಾಂತ ಮಟ್ಟಕ‍್ಕೆ ಆಯ‍್ಕೆಯಾಗಿವೆ.