ಸಂತ ಫಿಲೋಮಿನಾ ಕಾಲೇಜಿನಲ್ಲಿ 'ಫುಡೀಪ್ರಿನಿಯರ್' ಆಯೋಜನೆ
St Philomena College: ಸಂತ ಫಿಲೋಮಿನಾ ಕಾಲೇಜಿನ ಎಸ್ಜೆಎಂ ಸಭಾಂಗಣದಲ್ಲಿ ಈಚೆಗೆ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ & ಪ್ರೊಫೆಷನಲ್ ಸ್ಟಡೀಸ್ ವಿಭಾಗ ಮತ್ತು ಮ್ಯಾನೇಜ್ಮೆಂಟ್ ಅಸೋಸಿಯೇಷನ್ ವತಿಯಿಂದ 'ಫುಡೀಪ್ರಿನಿಯರ್' ಆಯೋಜಿಸಲಾಗಿತ್ತು.
ಪುತ್ತೂರು: ವಿದ್ಯಾರ್ಥಿಗಳು ಕೇವಲ ಉದ್ಯೋಗಕ್ಕಾಗಿ ಕಾಯದೆ, ತಮ್ಮ ಜ್ಞಾನ ಹಾಗೂ ಸೃಜನಶೀಲತೆ ಬಳಸಿಕೊಂಡು ಉದ್ಯೋಗ ಸೃಷ್ಟಿಸುವ ಉದ್ಯಮಿಗಳಾಗಬೇಕು ಎಂದು ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ರೆ.ಡಾ.ಆಂಟನಿ ಪ್ರಕಾಶ್ ಮೊಂತೆರೊ ಹೇಳಿದರು.
ಕಾಲೇಜಿನ ಎಸ್ಜೆಎಂ ಸಭಾಂಗಣದಲ್ಲಿ ಈಚೆಗೆ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ & ಪ್ರೊಫೆಷನಲ್ ಸ್ಟಡೀಸ್ ವಿಭಾಗ ಮತ್ತು ಮ್ಯಾನೇಜ್ಮೆಂಟ್ ಅಸೋಸಿಯೇಷನ್ ವತಿಯಿಂದ ಏರ್ಪಡಿಸಿದ್ದ 'ಫುಡೀಪ್ರಿನಿಯರ್–ಟೇಸ್ಟ್ ದಿ ಫ್ಯೂಚರ್' ಎಂಬ ವಿಶಿಷ್ಟ ಉದ್ಯಮಶೀಲತಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.

ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ನಾಯಕತ್ವ ಗುಣ ಹಾಗೂ ಉದ್ಯಮಶೀಲ ಮನೋಭಾವ ಬೆಳೆಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ದಕ್ಷಿಣ ಕನ್ನಡ ಮ್ಯೂಚುವಲ್ ಬೆನಿಫಿಟ್ ನಿಧಿ ಲಿಮಿಟೆಡ್ ಅಧ್ಯಕ್ಷ & ಪುತ್ತೂರಿನ ಹೋಟೆಲ್ ವಿಶ್ವ ರಂಜಿನಿಯ ವ್ಯವಸ್ಥಾಪಕ ಪಾಲುದಾರ ವಿ.ಜೆ. ಪುನೀತ್ ಮಾತನಾಡಿ, 'ಆಹಾರ ಮತ್ತು ಆತಿಥ್ಯ ಕ್ಷೇತ್ರದಲ್ಲಿ ಯುವಜನರಿಗೆ ಲಭ್ಯವಿರುವ ವಿವಿಧ ಉದ್ಯಮಾವಕಾಶಗಳ ಕುರಿತು ಮಾಹಿತಿ ನೀಡಿದರು.
ಸ್ಥಳೀಯ ಸಂಪನ್ಮೂಲಗಳು, ಹೊಸ ಆಲೋಚನೆಗಳು ಹಾಗೂ ಗುಣಮಟ್ಟದ ಉತ್ಪನ್ನಗಳನ್ನು ಸಮರ್ಪಕವಾಗಿ ಬಳಸಿಕೊಂಡರೆ, ಸಣ್ಣ ಪ್ರಯತ್ನವನ್ನು ಯಶಸ್ವಿ ಉದ್ಯಮವನ್ನಾಗಿ ಬೆಳೆಸಬಹುದು ಎಂದು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.

'ಫುಡೀಪ್ರಿನಿಯರ್' ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಸೃಜನಶೀಲತೆ, ತಂಡ ಕಾರ್ಯ, ವ್ಯವಹಾರಿಕ ಚಿಂತನೆ, ಸಂವಹನ ಕೌಶಲದ ಬಗ್ಗೆ ಅರಿವು ಪಡೆದರು.
ಪ್ರಶಾಂತ್ ರೈ ಪಿ ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಅಧ್ಯಕ್ಷ & ತೃತೀಯ ಬಿಬಿಎ ವಿದ್ಯಾರ್ಥಿ ಪ್ರಕೃತ್ ಜಿ.ಕೆ ಅತಿಥಿಗಳನ್ನು ಸ್ವಾಗತಿಸಿದರು. ತೃತೀಯ ಬಿಬಿಎ ವಿದ್ಯಾರ್ಥಿ ಭವತ್ ಬಿ.ಎಲ್ ವಂದಿಸಿದರು. ದ್ವಿತೀಯ ಬಿಬಿಎ (ಬಿಸಿನೆಸ್ ಅನಾಲಿಟಿಕ್ಸ್) ವಿದ್ಯಾರ್ಥಿನಿ ಸಮೃದ್ಧಿ ಚೌಟಾ ಕಾರ್ಯಕ್ರಮ ನಿರೂಪಿಸಿದರು. ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಹಾಗೂ ಪ್ರೊಫೆಷನಲ್ ಸ್ಟಡೀಸ್ ವಿಭಾಗದ ಡೀನ್ ಡಾ.ರಾಧಾಕೃಷ್ಣ ಗೌಡ ವಿ ಉಪಸ್ಥಿತರಿದ್ದರು.